Friday, April 18, 2008

 
ಮೌನ

ನಿನ್ನ ಮೌನವ ಓದಲಾರೆ ಗೆಳತಿ. ಬದುಕು ನನಗೆ ಓದು ಬರಹ ಕಲಿಸಿಲ್ಲ. ಶಾಲೆಗೆ ಹೋಗಿದ್ದೇನೋ ನಿಜ, ಆದರೆ ಬದುಕಿನ ಪರೀಕ್ಷೆಯಲ್ಲಿ ಉತ್ತೀರ್ಣನಾದವನು ನಾನಲ್ಲವೇ ಅಲ್ಲ. ನನ್ನದೇನಿದ್ದರೂ ಜನಪದ. ಹಾಡಬೇಕು, ಆಡಬೇಕು, ಮೈಮರೆಯುವಂತೆ ಕುಣಿಯಬೇಕು. ಮೌನ ನಿನ್ನ ನಗರದ ಭಾಷೆ. ಅದ ನಾ ಕಲಿತಿಲ್ಲ.

ಮನು.

This page is powered by Blogger. Isn't yours?